Tuesday, March 8, 2016

ನೀನಿಲ್ಲದೇ ನಾನಿಲ್ಲ















ನಿನ್ನ ಹೊರತು ನಾನೆಲ್ಲಿದ್ದೆ
ಪುರಾಣಪುರುಷನೇನಲ್ಲ, ಯೋನಿಜ ನಾನು
ನಿನಗೆ ಬಗೆದ ಅನ್ಯಾಯಕ್ಕೆಪ್ರಾಯಶ್ಚಿತ್ತ
ಕ್ಷಮೆ ಎಂಬೆರಡು ಅಕ್ಷರಗಳೆಂದಾದರೆ
ಆ ಅಕ್ಷರಗಳು ಕೂಡಿ ಸಂಭವಿಸಿದ ಶಬ್ದ
ನಾಚಿಕೆಯಿಂದ ಸಾಯಲಿ

ಧನ್ಯವಾದ, ನನ್ನೊಂದಿಗೆ ನೀನಿರುವ ಮೋದಕ್ಕೆ
ನೀನಿಲ್ಲದ ಜಗತ್ತಿನಲ್ಲಿ ನಾನು ಬದುಕುವ
ಬೇಸರ ಕಲ್ಪನೆಯಲ್ಲೇ ಅಂಜಿಸುತ್ತದೆ.
ಪ್ರೇಮಿಸಿದ್ದೇನೆ
ಕಾಮಿಸಿದ್ದೇನೆ
ಜಗಳ ಕಾದಿದ್ದೇನೆ
ನನಗೇ ಅಸಹ್ಯವಾಗುವ ಹಾಗೆ ವ್ಯವಹರಿಸಿದ್ದೇನೆ
ನೊಂದಿದ್ದೇನೆ
ನೋಯಿಸಿದ್ದೇನೆ

ಎಲ್ಲ ಅಳೆದೂ ಸುರಿದೂ ಕೊನೆಗೆ ಹೆಣ್ಣೇ
ತಾಯಿಯಾಗಿ, ಅಕ್ಕನಾಗಿ ತಂಗಿಯಾಗಿ ಹೆಂಡತಿಯಾಗಿ,
ಗೆಳತಿಯಾಗಿ, ಮಗಳಾಗಿ, ದೇವತೆಯಾಗಿ ... ..., ನನ್ನ ತುಂಬಿಕೊಂಡಿರುವ
ನಿನ್ನ ಹೊರತು ನಾನೆಲ್ಲಿ...

1 comment:

  1. ಮಹಿಳೆಗೆ ನೀವು ಸಲ್ಲಿಸಿರುವ ಗೌರವ ಸಮಂಜಸವಾಗಿದೆ.

    ReplyDelete