Wednesday, June 29, 2011

ಪ್ರವಾಹ


ಹೀಚು ಕಾಯಂತೆ ಇದ್ದವಳು ಹಣ್ಣಾದಳು
ಹುಡುಗಿಯಾಗಿದ್ದವಳು ಹೆಣ್ಣಾದಳು

ಮುಡಿದ ಸಂಪಿಗೆ ಘಮವು
ಹೆರಳು ಕೊರಳಿನ ಗಂಧ
ಮಿಳಿತು ಮುಗಿಲೇರಿರಲು ಚಕ್ಕಂದದಾನಂದ
ಇನಿಯನಂಗೈಯ್ಯಲ್ಲಿ ಆಡಿದಳು ನೋಡಿದಳು
ಸುಖದ ನೋವಿನ ನೂರು ರಾಗ ಕಣ್ಣಲ್ಲಿ

ಹೂವಂತೆ ಅರಳಿದಳು
ಹಾವಂತೆ ಹೊರಳಿದಳು
ಬಿಚ್ಚಿದಳು ಅರಚಿದಳು
ಕಚ್ಚಿದಳು ಪರಚಿದಳು
ಜೀವರಸ ಹೊಮ್ಮಿಸುವ ಸೆಲೆಯಾದಳು
ಹೊಳೆಯ ಸೆಳವಿಗೆ ಸಿಕ್ಕ ಎಲೆಯಾದಳು

5 comments:

  1. ಈ ಕವನ ಯಾಕೋ ಅಪೂರ್ಣ ಅಂತ ಅನ್ನಿಸ್ತಾ ಇದೆ..ಹೇಳಬೇಕಾದ ಏನನ್ನೋ ಇದು ಹೇಳ್ತಾ ಇಲ್ಲ ಅಂತ..ಯಾಕೆ ಹಾಗನ್ನಿಸ್ತಾ ಇದೆ...
    -ಪ್ರಜ್ಞಾ

    ReplyDelete
  2. ಮದುವೆಯವರೆಗೂ ಅವಳ ಪ್ರತಿ ಹಂತವೂ ಇಲ್ಲಿ ಬಂದಿದೆ. ನಂತರದ ಬೆಳವಣಿಗೆ ಕೌಟಂಬಿಕ ನೆಲೆಗಟ್ಟಿನಲ್ಲಷ್ಟೇ ಮಾಗುವುದು. ಅದು ತೀರಾ ಖಾಸಗಿ ಮತ್ತು ಅದರದೇ ಆದ ಹೊಳಪಿಲ್ಲದ ಪಠ್ಯ.
    ಇಲ್ಲಿನ ಲವಲವಿಕೆ ಇಷ್ಟವಾಯಿತು.

    ReplyDelete
  3. ಹೆಣ್ನು ಮತ್ತು ಬದುಕಿನ ಅರ್ಥ ಇನ್ನು ವಿಶಾಲವಾಗಿದ್ದರೆ ಕವನ ದ್ವನಿ ಪೂರ್ಣವಾಗಿರುತ್ತಿತ್ತು

    ReplyDelete
  4. ಅಶೋಕ, ಕವನ ಚೆನ್ನಾಗಿದೆ. ಈಗಲೂ ಇಂತಹ ಕವನಗಳನ್ನು ಬರೆಯುವುದು ನಿಮಗೆ ಸಾಧ್ಯವಾಗುತ್ತಿರುವುದು ಸಂತಸದ ವಿಷಯ. ನನಗೇಕೋ ಇಂಥವನ್ನು ಬರೆಯುವುದು ಇತ್ತೀಚೆಗೆ ಸಾಧ್ಯವಾಗುತ್ತಲೇ ಇಲ್ಲ...

    ReplyDelete