ಹೀಚು ಕಾಯಂತೆ ಇದ್ದವಳು ಹಣ್ಣಾದಳು
ಹುಡುಗಿಯಾಗಿದ್ದವಳು ಹೆಣ್ಣಾದಳು
ಮುಡಿದ ಸಂಪಿಗೆ ಘಮವು
ಹೆರಳು ಕೊರಳಿನ ಗಂಧ
ಮಿಳಿತು ಮುಗಿಲೇರಿರಲು ಚಕ್ಕಂದದಾನಂದ
ಇನಿಯನಂಗೈಯ್ಯಲ್ಲಿ ಆಡಿದಳು ನೋಡಿದಳು
ಸುಖದ ನೋವಿನ ನೂರು ರಾಗ ಕಣ್ಣಲ್ಲಿ
ಹೂವಂತೆ ಅರಳಿದಳು
ಹಾವಂತೆ ಹೊರಳಿದಳು
ಬಿಚ್ಚಿದಳು ಅರಚಿದಳು
ಕಚ್ಚಿದಳು ಪರಚಿದಳು
ಜೀವರಸ ಹೊಮ್ಮಿಸುವ ಸೆಲೆಯಾದಳು
ಹೊಳೆಯ ಸೆಳವಿಗೆ ಸಿಕ್ಕ ಎಲೆಯಾದಳು